Management Message

ಭುವನ ಜ್ಯೋತಿ (ರಿ) ಎಜುಕೇಷನ್ ಟ್ರಸ್ಟ್ ನ ವತಿಯಿಂದ ಗ್ರಾಮೀಣ ಪ್ರದೇಶದ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ಗುಣಮಟ್ಟದ ಮತ್ತು ಮೌಲ್ಯಾಧಾರಿತ  ಕಾನೂನು ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಭುವನ ಜ್ಯೋತಿ ಕಾನೂನು ಅಧ್ಯಯನ ಸಂಸ್ಥೆಯನ್ನು 2024 ರಲ್ಲಿ ಸ್ಥಾಪನೆ ಮಾಡಲಾಯಿತು . ಈ ಸಂಸ್ಥೆಯು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಶಿರ್ತಾಡಿ  ಗ್ರಾಮದಲ್ಲಿ ನೆಲೆಸಿದ್ದು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 13ರ ಮೂಡಬಿದ್ರೆಯಿಂದ ನಾರಾವಿ ಮಾರ್ಗದಲ್ಲಿ 10 ಕಿ.ಮೀ ಅಂತರದಲ್ಲಿ ಹಾಗೂ ಕಾರ್ಕಳದಿಂದ ಸುಮಾರು 25 ಕಿಲೋ ಮೀಟರ್ ಅಂತರದಲ್ಲಿ ನೆಲೆಸಿರುತ್ತದೆ. ಹೊರನಾಡು, ಶೃಂಗೇರಿ, ಮಲೆನಾಡು ಹಾಗೂ ತುಳುನಾಡು ಪ್ರದೇಶದ ವಿದ್ಯಾರ್ಥಿಗಳ ಕಾನೂನು ವಿದ್ಯಾಭ್ಯಾಸದ ಕನಸಿಗೆ ಜೀವತುಂಬುವ ನಿಟ್ಟಿನಲ್ಲಿ ಐದು ಪರಿಣಿತ ಶಾಲಾ ಶಿಕ್ಷಕರು ಈ ಸಂಸ್ಥೆಯನ್ನು ಸ್ಥಾಪಿಸಿರುತ್ತಾರೆ. ಕಾನೂನು ಕ್ಷೇತ್ರಕ್ಕೆ ಬದ್ಧ ವೃತ್ತಿಪರ  ಸಮೂಹವನ್ನು ತಯಾರು ಮಾಡುವ ಗುರಿಯನ್ನು ಸಂಸ್ಥೆಯು ಹೊಂದಿದೆ. ಮೌಲ್ಯಾಧಾರಿತ ಕಾನೂನು ಶಿಕ್ಷಣವನ್ನು ಪ್ರೋತ್ಸಾಹಿಸುವುದು ಸಂಸ್ಥೆಯ ಧ್ಯೇಯವಾಗಿದ್ದು ಕಲಿಕೆಗೆ  ಪೂರಕವಾದಂತಹ ಸುಸಜ್ಜಿತ ವ್ಯವಸ್ಥೆಯನ್ನು, ಹಚ್ಚ ಹಸಿರಿನ ನಿಸರ್ಗದ ಮಡಿಲಲ್ಲಿ ವಿದ್ಯಾರ್ಥಿಗಳಿಗಾಗಿ ಕಲ್ಪಿಸಿಕೊಡಲಾಗಿದೆ.

ವಿಶಾಲವಾದ  ತರಗತಿ ಕೊಠಡಿಗಳು, ಕಂಪ್ಯೂಟರ್ ಲ್ಯಾಬ್, ಸುಸಜ್ಜಿತ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ. ಕಾನೂನು ಕ್ಷೇತ್ರಕ್ಕೆ ಬೇಕಾದಂತಹ ಪ್ರಾಯೋಗಿಕ ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡಲು ಅಣುಕು  ನ್ಯಾಯಾಲಯ ಕೊಠಡಿ, ಇಂಟರ್ನ್ಶಿಪ್ ವ್ಯವಸ್ಥೆ, ವಕೀಲರೊಂದಿಗೆ ಸಂವಾದ, ನ್ಯಾಯಾಲಯ ಭೇಟಿ ಇತ್ಯಾದಿಯನ್ನು ನಡೆಸುತ್ತಿದ್ದೇವೆ. ಕಾನೂನು ನೆರವು, ಸಂವಾದ ಮತ್ತು ಕಾನೂನು ಪ್ರಕರಣದ ಅಧ್ಯಯನ ಗಳಿಗೆ ಒತ್ತು ಕೊಡಲಾಗುತ್ತದೆ. ವಿದ್ಯಾರ್ಥಿಗಳನ್ನು  ಕಾರ್ಪೊರೇಟ್ ಕಾನೂನು, ನ್ಯಾಯಾಂಗ ತನಿಖೆ, ಕಾನೂನು ಸಲಹೆ, ಶೈಕ್ಷಣಿಕ ಮತ್ತು ಸಾರ್ವಜನಿಕ ಸೇವೆ ಸೇರಿದಂತೆ ವೈವಿಧ್ಯಮಯ ವೃತ್ತಿ ಅವಕಾಶಗಳಿಗೆ ಸಿದ್ಧಪಡಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಯಲ್ಲಿ ಕ್ರೀಡಾ ಚಟುವಟಿಕೆ, ನೃತ್ಯ, ಸಂಗೀತ, ಕರಾವಳಿಯ ಗಂಡು ಕಲೆ ಯಕ್ಷಗಾನದ ತರಬೇತಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ಸಂಸ್ಥೆಯು ನೀಡುತ್ತದೆ. ವಿದ್ಯಾರ್ಥಿ ಜೀವನದ ಯಶಸ್ಸಿಗಾಗಿ ಅವರ ಆರೋಗ್ಯ, ವ್ಯಕ್ತಿತ್ವ ವಿಕಸನ, ಮೌಲ್ಯ  ಮತ್ತು  ಸೇವಾ ಮನೋಭಾವವನ್ನು ತುಂಬುವ ಸಕ್ರಿಯ ಪ್ರಯತ್ನದಲ್ಲಿ ನಮ್ಮ ಅಧ್ಯಾಪಕ ವೃಂದ ಸಕ್ರಿಯವಾಗಿ ತೊಡಗಿಕೊಂಡಿದೆ. ಈ ಸದಾವಕಾಶವನ್ನು ವಿದ್ಯಾರ್ಥಿಗಳು ಉಪಯೋಗಿಸಿಕೊಂಡು ತಮ್ಮ ವೃತ್ತಿ ಜೀವನದ ಭದ್ರಬುನಾದಿಯನ್ನು ರೂಪಿಸಿಕೊಳ್ಳುವುದಾಗಿ ತಮ್ಮೆಲ್ಲರಲ್ಲಿ ನನ್ನ ನಮ್ರ ವಿನಂತಿ ತಮಗೆಲ್ಲರಿಗೂ ಶುಭವಾಗಲಿ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಿಂದ ಸುಮಾರು 11 ಕಿಲೋ ಮೀಟರ್ ದೂರದ ಶಿರ್ತಾಡಿ ಗ್ರಾಮದ ಪ್ರಕೃತಿ ರಮಣೀಯ ಪ್ರಶಾಂತ ಪರಿಸರದಲ್ಲಿ ಭುವನ ಜ್ಯೋತಿ ಎಜುಕೇಶನ್ ಟ್ರಸ್ಟ್ (ರಿ) ನ ಪದಾಧಿಕಾರಿಗಳಾಗಿರುವ ಐದು ಶಿಕ್ಷಕರು  ಭುವನ ಜ್ಯೋತಿ ವಿದ್ಯಾಸಂಸ್ಥೆಯನ್ನು 2004 ರಲ್ಲಿ ಹುಟ್ಟು ಹಾಕಿ 5 ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ  ನವದೆಹಲಿಯ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಗೆ ಸಂಯೋಜಿತವಾಗಿರುವ ವಸತಿ ಶಾಲೆಯನ್ನು ಕಟ್ಟಿ  ನಾಡಿನ ನಾನಾ ಜಿಲ್ಲೆಗಳಿಂದ ಬಂದ ವಿದ್ಯಾರ್ಥಿಗಳಿಗೆ  ಸುಮಾರು 20 ವರ್ಷಗಳಿಂದ  ಶೈಕ್ಷಣಿಕ ಸೇವೆಯನ್ನು ಸಲ್ಲಿಸಿರುತ್ತೇವೆ.

ನಮ್ಮ ವಿದ್ಯಾಸಂಸ್ಥೆಯು ಹಳ್ಳಿಯ ಮಕ್ಕಳು ಸಹ ಕಾನೂನು ಶಿಕ್ಷಣವನ್ನು ಪಡೆಯುವ ಸಲುವಾಗಿ 2024 ರಲ್ಲಿ ಭುವನ ಜ್ಯೋತಿ ಕಾನೂನು ಅಧ್ಯಯನ ಸಂಸ್ಥೆಯನ್ನು ಸ್ಥಾಪನೆ ಮಾಡಿದೆ. ಪ್ರಥಮ ವರ್ಷದಲ್ಲಿ ಸುಮಾರು 60 ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳ ದಾಖಲಾತಿಯು ಈ ಸಂಸ್ಥೆಯ ಪದಾಧಿಕಾರಿಗಳ ಹಾಗೂ ಗುರು ವೃಂದದವರ ಜವಾಬ್ದಾರಿಯನ್ನು ಹೆಚ್ಚಿಸಿದೆ. ಈ ಕಾಲೇಜು ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿದೆ ಹಾಗೂ  ಭಾರತೀಯ ಬಾರ್ ಕೌನ್ಸಿಲ್ ನಿಂದ ಅಂಗೀಕೃತಗೊಂಡಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಮೂರು ವರ್ಷದ ಎಲ್. ಎಲ್. ಬಿ ಪದವಿ ಹಾಗೂ ಐದು ವರ್ಷದ ಬಿ.ಬಿ.ಎ ಎಲ್.ಎಲ್.ಬಿ ಪದವಿಯನ್ನು ಪ್ರಾರಂಭಿಸಿದೆ. ಕಾನೂನು ಬೋಧನೆ ಮಾಡುವ ನುರಿತ ಅನುಭವಿ ಉಪನ್ಯಾಸಕ ವೃಂದವನ್ನು ಸಂಸ್ಥೆ ನೇಮಿಸಿದ್ದು, ಸೂಕ್ತ ಮಾರ್ಗದರ್ಶನವನ್ನು ನೀಡುವ ನಿಟ್ಟಿನಲ್ಲಿ ನುರಿತ ಕಾನೂನು ತಜ್ಞರಿಂದ ವಾರಕ್ಕೊಮ್ಮೆ ಅತಿಥಿ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗುತ್ತಿದೆ.  ಪ್ರಜ್ಞಾವಂತ ಕಾನೂನು ವಿದ್ಯಾರ್ಥಿಗಳನ್ನು ರೂಪಿಸುವ ನಿಟ್ಟಿನಲ್ಲಿ ಅದ್ಯಾಪಕ ವೃಂದ ದಿಟ್ಟ ಪ್ರಯತ್ನ ನಡೆಸುತ್ತಿದ್ದಾರೆ. ಕಲಿಕೆಗೆ ಬೇಕಾದ ಎಲ್ಲಾ ಮೂಲ ಸೌಕರ್ಯಗಳಾದ ವಿಶಾಲವಾದ ಆಟದ ಮೈದಾನ, 2500 ಕ್ಕಿಂತಲೂ ಹೆಚ್ಚಿನ ಕಾನೂನು ಪುಸ್ತಕಗಳನ್ನು ಒಳಗೊಂಡಿರುವ ಸುಸಜ್ಜಿತ ಗ್ರಂಥಾಲಯ, ಕಂಪ್ಯೂಟರ್ ಕೊಠಡಿ, ಅಣುಕು ನ್ಯಾಯಾಲಯ, ಕಾನೂನು ಸಲಹಾ ಕೇಂದ್ರ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ಸೌಕರ್ಯ ಒದಗಿಸಲಾಗಿದೆ. ಶಿಕ್ಷಣದ ಜೊತೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯೇತರ  ಚಟುವಟಿಕೆಗಳಾದ ಯೋಗ ತರಬೇತಿ,  ಕ್ರೀಡೆ, ಸಂಗೀತ, ನೃತ್ಯ, ಕರಾವಳಿಯ ಹೆಮ್ಮೆಯ ಕಲೆ ತೆಂಕು-  ಬಡಗು ಶೈಲಿಯ ಯಕ್ಷಗಾನದ ತರಬೇತಿಯನ್ನು ನೀಡಲಾಗುತ್ತಿದೆ.

ಕಾನೂನು ವಿದ್ಯಾಭ್ಯಾಸ ಮಾಡಲು ಆಸಕ್ತಿ ಇರುವಂತಹ ವಿದ್ಯಾರ್ಥಿಗಳು ನಮ್ಮ ಕಾಲೇಜಿನಲ್ಲಿ ದಾಖಲಾತಿ ಪಡೆದುಕೊಂಡು ತಮ್ಮ ಜೀವನವನ್ನು ಕಾನೂನು ಸೇವೆಗೆ ಸಮರ್ಪಕವಾಗಿ ತಯಾರು ಮಾಡುವ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ನನ್ನ ವಿನಂತಿ

Management

Mr. Prashant D'souza

Mr . Raghavendra Prabhu

Mr. Prashant N