President Message
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಿಂದ ಸುಮಾರು 11 ಕಿಲೋ ಮೀಟರ್ ದೂರದ ಶಿರ್ತಾಡಿ ಗ್ರಾಮದ ಪ್ರಕೃತಿ ರಮಣೀಯ ಪ್ರಶಾಂತ ಪರಿಸರದಲ್ಲಿ ಭುವನ ಜ್ಯೋತಿ ಎಜುಕೇಶನ್ ಟ್ರಸ್ಟ್ (ರಿ) ನ ಪದಾಧಿಕಾರಿಗಳಾಗಿರುವ ಐದು ಶಿಕ್ಷಕರು ಭುವನ ಜ್ಯೋತಿ ವಿದ್ಯಾಸಂಸ್ಥೆಯನ್ನು 2004 ರಲ್ಲಿ ಹುಟ್ಟು ಹಾಕಿ 5 ನೇ ತರಗತಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನವದೆಹಲಿಯ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಗೆ ಸಂಯೋಜಿತವಾಗಿರುವ ವಸತಿ ಶಾಲೆಯನ್ನು ಕಟ್ಟಿ ನಾಡಿನ ನಾನಾ ಜಿಲ್ಲೆಗಳಿಂದ ಬಂದ ವಿದ್ಯಾರ್ಥಿಗಳಿಗೆ ಸುಮಾರು 20 ವರ್ಷಗಳಿಂದ ಶೈಕ್ಷಣಿಕ ಸೇವೆಯನ್ನು ಸಲ್ಲಿಸಿರುತ್ತೇವೆ.
ನಮ್ಮ ವಿದ್ಯಾಸಂಸ್ಥೆಯು ಹಳ್ಳಿಯ ಮಕ್ಕಳು ಸಹ ಕಾನೂನು ಶಿಕ್ಷಣವನ್ನು ಪಡೆಯುವ ಸಲುವಾಗಿ 2024 ರಲ್ಲಿ ಭುವನ ಜ್ಯೋತಿ ಕಾನೂನು ಅಧ್ಯಯನ ಸಂಸ್ಥೆಯನ್ನು ಸ್ಥಾಪನೆ ಮಾಡಿದೆ. ಪ್ರಥಮ ವರ್ಷದಲ್ಲಿ ಸುಮಾರು 60 ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳ ದಾಖಲಾತಿಯು ಈ ಸಂಸ್ಥೆಯ ಪದಾಧಿಕಾರಿಗಳ ಹಾಗೂ ಗುರು ವೃಂದದವರ ಜವಾಬ್ದಾರಿಯನ್ನು ಹೆಚ್ಚಿಸಿದೆ. ಈ ಕಾಲೇಜು ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿದೆ ಹಾಗೂ ಭಾರತೀಯ ಬಾರ್ ಕೌನ್ಸಿಲ್ ನಿಂದ ಅಂಗೀಕೃತಗೊಂಡಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಮೂರು ವರ್ಷದ ಎಲ್. ಎಲ್. ಬಿ ಪದವಿ ಹಾಗೂ ಐದು ವರ್ಷದ ಬಿ.ಬಿ.ಎ ಎಲ್.ಎಲ್.ಬಿ ಪದವಿಯನ್ನು ಪ್ರಾರಂಭಿಸಿದೆ. ಕಾನೂನು ಬೋಧನೆ ಮಾಡುವ ನುರಿತ ಅನುಭವಿ ಉಪನ್ಯಾಸಕ ವೃಂದವನ್ನು ಸಂಸ್ಥೆ ನೇಮಿಸಿದ್ದು, ಸೂಕ್ತ ಮಾರ್ಗದರ್ಶನವನ್ನು ನೀಡುವ ನಿಟ್ಟಿನಲ್ಲಿ ನುರಿತ ಕಾನೂನು ತಜ್ಞರಿಂದ ವಾರಕ್ಕೊಮ್ಮೆ ಅತಿಥಿ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರಜ್ಞಾವಂತ ಕಾನೂನು ವಿದ್ಯಾರ್ಥಿಗಳನ್ನು ರೂಪಿಸುವ ನಿಟ್ಟಿನಲ್ಲಿ ಅದ್ಯಾಪಕ ವೃಂದ ದಿಟ್ಟ ಪ್ರಯತ್ನ ನಡೆಸುತ್ತಿದ್ದಾರೆ. ಕಲಿಕೆಗೆ ಬೇಕಾದ ಎಲ್ಲಾ ಮೂಲ ಸೌಕರ್ಯಗಳಾದ ವಿಶಾಲವಾದ ಆಟದ ಮೈದಾನ, 2500 ಕ್ಕಿಂತಲೂ ಹೆಚ್ಚಿನ ಕಾನೂನು ಪುಸ್ತಕಗಳನ್ನು ಒಳಗೊಂಡಿರುವ ಸುಸಜ್ಜಿತ ಗ್ರಂಥಾಲಯ, ಕಂಪ್ಯೂಟರ್ ಕೊಠಡಿ, ಅಣುಕು ನ್ಯಾಯಾಲಯ, ಕಾನೂನು ಸಲಹಾ ಕೇಂದ್ರ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಸತಿ ಸೌಕರ್ಯ ಒದಗಿಸಲಾಗಿದೆ. ಶಿಕ್ಷಣದ ಜೊತೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಾದ ಯೋಗ ತರಬೇತಿ, ಕ್ರೀಡೆ, ಸಂಗೀತ, ನೃತ್ಯ, ಕರಾವಳಿಯ ಹೆಮ್ಮೆಯ ಕಲೆ ತೆಂಕು- ಬಡಗು ಶೈಲಿಯ ಯಕ್ಷಗಾನದ ತರಬೇತಿಯನ್ನು ನೀಡಲಾಗುತ್ತಿದೆ.
ಕಾನೂನು ವಿದ್ಯಾಭ್ಯಾಸ ಮಾಡಲು ಆಸಕ್ತಿ ಇರುವಂತಹ ವಿದ್ಯಾರ್ಥಿಗಳು ನಮ್ಮ ಕಾಲೇಜಿನಲ್ಲಿ ದಾಖಲಾತಿ ಪಡೆದುಕೊಂಡು ತಮ್ಮ ಜೀವನವನ್ನು ಕಾನೂನು ಸೇವೆಗೆ ಸಮರ್ಪಕವಾಗಿ ತಯಾರು ಮಾಡುವ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ನನ್ನ ವಿನಂತಿ

ಶ್ರೀ. ರಾಘವೇಂದ್ರ ಪ್ರಭು
ಅಧ್ಯಕ್ಷರು
ಭುವನ ಜ್ಯೋತಿ ಎಜುಕೇಷನ್ ಟ್ರಸ್ಟ್
How to Apply?
- You Apply
Tell us a little about yourself and we’ll help with the rest. Our convenient online application tool only takes 10 minutes to complete.
- We Connect
After you submit your application, an admissions representative will contact you and will help you to complete the process.
- You Get Ready
Once you’ve completed your application and connected with an admissions representative, you’re ready to create your schedule.